೬೬ನೆ ಕರ್ನಾಟಕ ರಾಜ್ಯೋತ್ಸವ

ಎಸ್ ಡಿ ಎಂ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ  ಎಸ್ ಡಿ ಎಂ ದಂತ ಮಹಾವಿದ್ಯಾಲಯದಲ್ಲಿ ಸರಳವಾಗಿ ೬೬ನೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಉಪಕುಲಪತಿ  ಡಾ.  ನಿರಂಜನ್ ಕುಮಾರ್  ಅವರು ಕನ್ನಡ  ಭಾಷೆಯ ವಿಶೇಷತೆ ಮತ್ತು ವೈವಿದ್ಯತೆಯ  ಬಗ್ಗೆ ತಿಳಿ ಹೇಳಿದರು. ನಮ್ಮ ದೈನಂದಿನ ಭಾಷೆಯಲ್ಲಿ ಶುದ್ಧವಾದ ಕನ್ನಡವನ್ನು ಬಳಸಲು ಪ್ರಯತ್ನ ಮಾಡಲು ಸಲಹೆ ನೀಡಿದರು. ಗೌರವ ಅಥಿತಿಯಾಗಿ ಪಾಲ್ಗೊಂಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ ಅವರು ಕನ್ನಡ ತುಂಬಾ ವೈಶಿಷ್ಟಪೂರ್ಣ ಭಾಷೆ ಅದನ್ನು ಬೆಳೆಸವ ಜವಾಬ್ದಾರಿ ನಮ್ಮೆಲ್ಲರೆ ಮೇಲಿದೆಯೆಂದು ಹೇಳಿದರು. ವೈದ್ಯಕೀಯ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ನ್. ಉಡುಪ ಅವರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದಂತ ವೈದ್ಯಕೀಯ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ ನಾಯಕ ಸ್ವಾಗತ ಭಾಷಣ ಮಾಡಿದರು. ಡಾ, ಶೈಲಶ್ರೀ ಪ್ರಾರ್ಥನಾ ಗೀತೆಯನ್ನು ಹಾಡಿದರು.  ಸಾಂಸ್ಕೃತಿಕ ಕಾರ್ಯದರ್ಶಿ  ಡಾ. ವಿಜಯ ತ್ರಾಸದ  ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಡಾ. ಸುಶ್ಮಿತಾ ಶೆಟ್ಟಿ, ಡಾ. ಪ್ರವೀಣ್ ಪರಶೆಟ್ಟಿ ಡಾ. ಅಶೋವರ್ಧಿನಿ ಮತ್ತು ಡಾ. ಶ್ರೇಯ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಮ್ಮನ್ನಗಲಿದ ಕನ್ನಡದ ನಾಯಕ ನಟ ಪುನೀತ್ ರಾಜ್ ಕುಮಾರ ಅವರಿಗೆ ಮೌನ ಆಚರಣೆ  ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು ಅಲ್ಲದೆ  ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಾಲಾಗಿತ್ತು.

 

 

© 2024Copyright 2017. All rights reserved Wirecamp Interactive